ಮಾಲಿಬ್ಡಿನಮ್
ಆವರ್ತಕೋಷ್ಟಕದ ಆರನೆಯ B ಗುಂಪಿಗೆ ಸೇರಿದ ಲೋಹಧಾತು. ಪ್ರತೀಕ Mo. ಪರಮಾಣು ಸಂಖ್ಯೆ 42; ಪರಮಾಣು ತೂಕ 95.94. ಇದಕ್ಕೂ ಈ ಉಪಗುಂಪಿನ ಇತರ ಸದಸ್ಯಧಾತುಗಳಾದ ಕ್ರೋಮಿಯಮ್ ಮತ್ತು ಟಂಗ್‍ಸ್ಟನ್‍ಗಳಿಗೂ ಸಾಮ್ಯ ಇದೆ. ಇದರ ಏಳು ನೈಸರ್ಗಿಕ ಸ್ಥಿರ ಐಸೋಟೋಪುಗಳ ರಾಶಿಸಂಖ್ಯೆಗಳು 92,94,95,96,97,98 ಮತ್ತು 100. ಇವಲ್ಲದೆ 91,93,99, 102 ಮತ್ತು 105 ರಾಶಿ ಸಂಖ್ಯೆಗಳುಳ್ಳ ಕೃತಕ ವಿಕಿರಣಪಟು ಐಸೊಟೋಪುಗಳೂ ಉಂಟು. ಇದರ ಪರಮಾಣುವಿನ N ಮತ್ತು O ಹೊರಚಿಪ್ಪುಗಳು ಭರ್ತಿಯಾಗಿಲ್ಲ. ಅವುಗಳ ಎಲೆಕ್ಟ್ರಾನಿನ ವಿನ್ಯಾಸ 4s24p64d55s1.

	ಮಾಲಿಬ್ಡಿನಮ್ ಪ್ರಕೃತಿಯಲ್ಲಿ ಧಾತುವಿನ ರೂಪದಲ್ಲಿ ದೊರೆಯುವುದಿಲ್ಲ. ಮಾಲಿಬ್ಡಿನೈಟ್ (ಒos2) ಇದರ ಮುಖ್ಯ ಅದುರು. ಧಾತುವಿಗೆ ಮಾಲಿಬ್ಡಿನಮ್ ಎಂದು ಹೆಸರಾಗಲು ಈ ಖನಿಜವೇ ಕಾರಣ. ಇದು ಗ್ರ್ಯಾಫೈಟನ್ನು ನಿಕಟವಾಗಿ ಹೋಲುತ್ತಿದ್ದುದರಿಂದಲೂ ಆಗ ಗ್ರ್ಯಾಫೈಟನ್ನು ಪ್ಲೆಂಬಗೊ ಅಥವಾ ಕಪ್ಪು ಸೀಸ ಎಂದು ಕರೆಯುತ್ತಿದ್ದುದರಿಂದಲೂ ಮಾಲಿಬ್ಡಿನೈಟ್ ಕೂಡ ಗ್ರ್ಯಾಫೈಟಿನ ಇನ್ನೊಂದು ರೂಪ ಇರಬೇಕೆಂಬ ತಪ್ಪು ಗ್ರಹಿಕೆಯಿಂದ ಗ್ರೀಕರು ಅದನ್ನು ಮಾಲಿಬ್ಡಿನೈಟ್ ಎಂದು ಕರೆದರು. ಗ್ರೀಕ್ ಭಾಷೆಯಲ್ಲಿ ಮಾಲಿಬ್ಡಾಸ್ ಎಂದರೆ ಸೀಸ ಎಂದು ಅರ್ಥವಿದೆ. ಸ್ವೀಡನ್ನಿನ ರಸಾಯನವಿಜ್ಞಾನಿ ಷೀಲೆ (1742-86) ಎಂಬವ ನಡೆಸಿದ (1778) ಒಂದು ಪ್ರಯೋಗದಿಂದ ಈ ಸಂದೇಹ ನಿವಾರಣೆಯಾಯಿತು. ಗ್ರ್ಯಾಫೈಟನ್ನು ನೈಟ್ರಿಕ್ ಆಮ್ಲದಿಂದ ಸಂಸ್ಕರಿಸಿದಾಗ ಹಸುರು ಮಿಶ್ರಿತ ಹಳದಿ ಬಣ್ಣದ ಗ್ರ್ಯಾಫಿಟಿಕ್ ಆಮ್ಲ ಉಂಟಾಯಿತು. ಮಾಲಿಬ್ಡಿನೈಟಾದರೂ ಬಿಳಿಯ ಉತ್ಪನ್ನ ನೀಡಿತು. ಶೇಷ ವಸ್ತುವಿಗೆ ಆಮ್ಲೀಯ ಲಕ್ಷಣಗಳಿದ್ದುವು. ಆದ್ದರಿಂದ ಮಾಲಿಬ್ಡಿನೈಟ್ ಮತ್ತು ಗ್ರ್ಯಾಫೈಟ್ ಬೇರೆ ಬೇರೆ ಪದಾರ್ಥಗಳೆಂಬುದು ದೃಢಪಟ್ಟಿತು.

	ಹೆಲ್ಮ್ ಎಂಬ ರಸಾಯನವಿಜ್ಞಾನಿ ಮಾಲಿಬ್ಡಿಕ್ ಆಮ್ಲವನ್ನು (ಮಾಲಿಬ್ಡಿನೈಟನ್ನು ನೈಟ್ರಿಕ್ ಆಮ್ಲದಿಂದ ಸಂಸ್ಕರಿಸಿದಾಗ ಲಭಿಸುವ ಬಿಳಿಯ ಪದಾರ್ಥ) ಇದ್ದಲಿನೊಡನೆ ಕಾಸಿ ಮಾಲಿಬ್ಡಿನಮ್ ಪುಡಿಯನ್ನು ತಯಾರಿಸಿದ (1790). ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುವ ಧಾತುಗಳ ಪೈಕಿ ಮಾಲಿಬ್ಡಿನಮ್ಮಿನದು 34ನೆಯ ಸ್ಥಾನ. 1915ರ ತನಕವೂ ಇದನ್ನು ವಿರಳ ಧಾತುವೆಂದೇ ಪರಿಗಣಿಸಲಾಗಿತ್ತು. ಮಾಲಿಬ್ಡಿನೈಟ್ ಅದುರಿನ ಹೊಸ ನಿಕ್ಷೇಪಗಳು ಪತ್ತೆಯಾದಂತೆಲ್ಲ ಮತ್ತು ಲೋಹದ ವಿಶಿಷ್ಟ ಗುಣಗಳು ತಿಳಿದು ಬಂದಂತೆಲ್ಲ ಅದರ ಉತ್ಪಾದನೆ ಹೆಚ್ಚಾಯಿತು. ಪ್ರಪಂಚದ ಒಟ್ಟು ಉತ್ಪಾದನೆಯ 92% ಭಾಗವನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳೇ ಪೂರೈಸುತ್ತಿವೆ ಎಂಬುದು ಒಂದು ಅಂದಾಜು. ವುಲ್ಫನೈಟ್ (ಸೀಸದ ಮಾಲಬ್ಡೇಟ್ (Pbಒoಔ4) ಪೊವೆಲ್ಲೈಟ್ (ಕ್ಯಾಲ್ಸಿಯಮ್ ಟಂಗ್ ಸ್ಟೊಮಾಲಿಬ್ಡೇಟ್ [ಅಚಿ(ಒo, W)ಔ4] ಮತ್ತು ಮಾಲಿಬ್ಡಿನಮ್ ಟ್ರೈ ಆಕ್ಸೈಡ್ (ಒoಔ3) ಇದರ ಅಪ್ರಧಾನ ಖನಿಜಗಳು.

	ಮಾಲಿಬ್ಡಿನೈಟ್ ಸಾಮಾನ್ಯವಾಗಿ ಗ್ರ್ಯಾನೈಟ್ ಶಿಲೆಯಲ್ಲಿ ಸೂಕ್ಷ್ಮಕಣಗಳ ರೂಪದಲ್ಲಿ ಹಂಚಿಹೋಗಿರುತ್ತದೆ. ಶಿಲೆಯನ್ನು ನುಣ್ಣಗೆ ಪುಡಿಮಾಡಿ ತೇಲ್ನೊರೆವಿಧಾನದಿಂದ ಅದುರನ್ನು ಖನಿಜಕಸದಿಂದ ಬೇರ್ಪಡಿಸುವರು. ಸಾರೀಕರಿಸಿದ ಅದುರನ್ನು ವಾಯುವಿನಲ್ಲಿ ಹುರಿದಾಗ ಮಾಲಿಬ್ಡಿನಮ್ ಟ್ರೈ ಆಕ್ಸೈಡ್ ಉಂಟಾಗುತ್ತದೆ. ಕ್ರೋಮಿಯಮ್ಮಿನ ಉತ್ಪಾದನೆಯಲ್ಲಿ ಮಾಡುವಂತೆ ಇಲ್ಲೂ ಥರ್ಮೈಟ್ ವಿಧಾನವನ್ನು ಬಳಸಿ ಅಲ್ಯೂಮಿನಿಯಮ್ ಪುಡಿಯಿಂದ ಆಕ್ಸೈಡನ್ನು ಲೋಹಕ್ಕೆ ಅಪಕರ್ಷಿಸಲಾಗುವುದು. ಕೈಗಾರಿಕಾ ಮೊತ್ತದಲ್ಲಿ ಅಪಕರ್ಷಣಕ್ಕೆ ಹೈಡ್ರೊಜನ್ನನ್ನು ಬಳಸುತ್ತಾರೆ. ಇದನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಏಕೆಂದರೆ 1000oಅ ಉಷ್ಣತೆಯಲ್ಲಿ ಮಾಲಿಬ್ಡಿನಮ್ ಟ್ರೈಆಕ್ಸೈಡ್ ಕರ್ಪೂರೀಕರಣಗೊಳ್ಳುವುದು. ಆದ್ದರಿಂದ ಮೊದಲ ಹಂತದಲ್ಲಿ ಕಡಿಮೆ ತಾಪದಲ್ಲಿ ಟ್ರೈಆಕ್ಸೈಡನ್ನು ಡೈಆಕ್ಸೈಡಿಗೆ ಅಪಕರ್ಷಿಸುತ್ತಾರೆ. ಇದು ಬಾಷ್ಪಶೀಲವಲ್ಲದ್ದರಿಂದ 1100oಅ ಉಷ್ಣತೆಯಲ್ಲಿ ಸರಾಗವಾಗಿ ಲೋಹಕ್ಕೆ ಅಪಕರ್ಷಣೆ ಹೊಂದುವುದು.

	ಮಾಲಿಬ್ಡಿನಮ್ ಸಾಕಷ್ಟು ಗಡುಸಾದ ಬಿಳಿಯ ಲೋಹ. ಸಾಮಾನ್ಯ ಉಷ್ಣತೆಯಲ್ಲಿ ವಾತಾವರಣದಿಂದ ಅದರ ಮೇಲ್ಮೈ ಕಲುಷಿತವಾಗದು. ಕೆಂಗಾವಿನಲ್ಲಿ ನಿಧಾನವಾಗಿ ಟ್ರೈಆಕ್ಸೈಡ್ ಆಗಿ ಉತ್ಕರ್ಷಗೊಳ್ಳುವುದು. ಇದರ ಗರಿಷ್ಠ ದ್ರವನಬಿಂದು 2625oಅ. ಸಾಪೇಕ್ಷ ಸಾಂದ್ರತೆ 10.2. ಸಾಮಾನ್ಯ ರಾಸಾಯನಿಕ ದ್ರಾವಣಗಳಿಂದ ಪ್ರಭಾವಿತವಾಗದಿದ್ದರೂ ಹೈಡ್ರೊಕ್ಲೋರಿಕ್‍ಆಮ್ಲ, ನೈಟ್ರಿಕ್‍ಆಮ್ಲ ಮತ್ತು ಬಿಸಿಯಾದ ಸಾರಯುತ ಸಲ್ಫ್ಯೂರಿಕ್‍ಆಮ್ಲಗಳೊಡನೆ ವರ್ತಿಸುವುದು. ಅದರ ಗರಿಷ್ಠ ದ್ರವನಬಿಂದು, ಉತ್ಕøಷ್ಟ ಸ್ಥಿತಿಸ್ಥಾಪಕತ್ವ, ಉತ್ತಮ ಉಷ್ಣವಹನ ಮತ್ತು ವಿದ್ಯುದ್ವಹನ ಸಾಮಥ್ರ್ಯ, ಕಡಿಮೆ ವಿಕಾಸಾಂಕ, ಔಷ್ಣೀಯ ನ್ಯೂಟ್ರಾನುಗಳನ್ನು ಅಷ್ಟಾಗಿ ಹೀರದಿರುವಿಕೆ ಇತ್ಯಾದಿ ಗುಣಗಳು ಮಾಲಿಬ್ಡಿನಮ್ಮಿನ ವ್ಯಾಪಕ ಉಪಯೋಗಗಳಿಗೆ ಕಾರಣವಾಗಿವೆ.

	ರೇಡಿಯೊ ನಳಿಕೆ ಮತ್ತು ಎಕ್ಸ್‍ಕಿರಣ ನಳಿಕೆಗಳಲ್ಲಿ ಲಕ್ಷ್ಯವಾಗಿ (ಟಾರ್ಜೆಟ್) ಮಾಲಿಬ್ಡಿನಮ್ಮನ್ನು ಬಳಸುತ್ತಾರೆ. ಇದರ ಅಧಿಕ ದ್ರವನಬಿಂದುವಿನ ಸಲುವಾಗಿ ವಿದ್ಯುತ್ ಬಲ್ಬುಗಳಲ್ಲಿ ಟಂಗಸ್ಟನ್ ತಂತುಗಳಿಗೆ ಆಧಾರವಾಗಿ ಇದನ್ನು ಬಳಸುವುದಿದೆ. ಮಾಲಿಬ್ಡಿನಮ್ ಮತ್ತು ಗಟ್ಟಿ ಗಾಜಿನ ವಿಕಾಸಾಂಕಗಳು ಹೆಚ್ಚು ಕಡಿಮೆ ಸಮವಾಗಿರುವುದರಿಂದ ಈ ಲೋಹದ ತಂತಿಗಳನ್ನು ಗಾಜಿನ ಉಪಕರಣಗಳಿಗೆ ಬೆಸೆದರೆ ಬಾಧಕವಿಲ್ಲ. ಅಲ್ಲದೆ ಅದರ ಮೇಲ್ಮೈಯಲ್ಲಿರುವ ಆಕ್ಸೈಡ್ ಗಾಜಿನಲ್ಲಿ ವಿಲೀನವಾಗಿ ಸುಭದ್ರ ಬೆಸುಗೆ ಉಂಟಾಗುತ್ತದೆ.

	ಉತ್ಪಾದಿತ ಮಾಲಿಬ್ಡಿನಮ್ಮಿನ ಸುಮಾರು 90% ಭಾಗ ಕಬ್ಬಿಣದ ಮಿಶ್ರಲೋಹಗಳ ತಯಾರಿಕೆಗೆ ಬಳಕೆಯಾಗುವುದು. ಲೇಶಮಾತ್ರ ಮಾಲಿಬ್ಡಿನಮ್ ಇದ್ದರೂ ಸಾಕು ಉಕ್ಕಿನ ಸಾಮಥ್ರ್ಯ ಹೆಚ್ಚಿ ಅದರ ಭಿದುರತೆ ತಗ್ಗುವುದು. ಸಮುದ್ರದ ನೀರು, ಬಿಸಿಯಾದ ಸಲ್ಫ್ಯೂರಿಕ್ ಆಮ್ಲ ಮತ್ತು ಸಲ್ಫ್ಯೂರಸ್ ಆಮ್ಲಗಳು, ತಟಸ್ಥಕ್ಲೋರೈಡ್ ದ್ರಾವಣಗಳು ಮಾಲಿಬ್ಡಿನಮ್ ಉಕ್ಕಿನ ಮೇಲೆ ಯಾವುದೇ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಆದ್ದರಿಂದಲೇ ಯುದ್ಧನೌಕೆಗಳ ಮೈಗೆ ತೊಡಿಸಿರುವ ದಪ್ಪ ಕವಚಗಳು. ಕೋವಿತುಪಾಕಿಗಳು ಮತ್ತು ಒತ್ತಡದಲ್ಲಿ ಬಳಸುವ ಕುದಿಹಂಡೆಗಳು ಇಂಥಲ್ಲೆಲ್ಲ ಮಾಲಿಬ್ಡಿನಮ್ ಉಕ್ಕಿನಿಂದ ನಿರ್ಮಿಸುವುದು ರೂಢಿ. ಇಂಥ ಖಜಾನೆಗಳು ಕಾಲಕಳೆದಂತೆ ಹೆಚ್ಚು ಅಭೇದ್ಯವಾಗುವುವೆಂದು ಹೇಳಲಾಗಿದೆ. ಬೈರಿಗೆಯ ತಯಾರಿಕೆಯಲ್ಲೂ ಈ ಉಕ್ಕು ಉಪಯೋಗಕ್ಕೆ ಬರುತ್ತದೆ. ಅವು ಮುಕ್ಕಾಗುವುದಿಲ್ಲ. ಮ್ಯಾಂಗನೀಸ್ ಮತ್ತು ಕ್ರೋಮಿಯಮ್‍ಗಳು 6-7%ನಷ್ಟು ಇರುವ ಮಾಲಿಬ್ಡಿನಮ್ ಸಹಿತ ಉಕ್ಕನ್ನು ವೇಗವಾಗಿ ತಿರುಗುವ ಯಂತ್ರ ಭಾಗಗಳ ತಯಾರಿಕೆಯಲ್ಲಿ ಬಳಸುತ್ತಾರೆ.

	ಮಾಲಿಬ್ಡಿನಮ್ ಮತ್ತು ಅದರ ಸಂಯುಕ್ತಗಳು ಉಪಯುಕ್ತ ಕ್ರಿಯಾವರ್ಧಕಗಳು ಎನಿಸಿಕೊಂಡಿವೆ. ಉದಾಹರಣೆಗೆ ನೈಟ್ರೊಜನ್ ಮತ್ತು ಹೈಡ್ರೊಜನ್ನುಗಳಿಂದ ಅಮೋನಿಯ ಸಂಶ್ಲೇಷಿಸುವ ಕ್ರಿಯೆಯಲ್ಲಿ ಮಾಲಿಬ್ಡಿಕ್ ಆಕ್ಸೈಡನ್ನು ಕ್ರಿಯಾವರ್ಧಕವಾಗಿ ಉಪಯೋಗಿಸಿದಾಗ ಇಳುವರಿ ಸುಧಾರಿಸುತ್ತದೆ. ಪೆಟ್ರೊಲಿನಲ್ಲಿರುವ ಗಂಧಕದ ಅಂಶವನ್ನು ಹೋಗಲಾಡಿಸಲು ಕೋಬಾಲ್ಟ್ ಮಾಲಿಬ್ಡೇಟನ್ನು ಪ್ರಯೋಗಿಸುತ್ತಾರೆ. ಮಾಲಿಬ್ಡೇಟುಗಳು ದ್ರವಿತ ಸಿಲಿಕೇಟುಗಳ ಮೇಲ್ಮೈ ಎಳೆತವನ್ನು ಕಡಿಮೆಮಾಡಿ ಅವುಗಳ ಆದ್ರ್ರಗುಣಗಳನ್ನು ಹೆಚ್ಚಿಸುವುದರಿಂದ ಕುಂಭಕಲಾ ತಂತ್ರಗಳಲ್ಲಿ ಬಳಕೆಯಾಗುತ್ತಿದೆ.

	ರಾಸಾಯನಿಕ ಕೈಗಾರಿಕೆಗಳಲ್ಲಿ ಮಾಲಿಬ್ಡಿನಮ್‍ನ ಬಳಕೆ ಸಾಮಾನ್ಯ. ಕೆಲವು ಮುದ್ರಣಶಾಯಿಗಳು, ಲ್ಯಾಕರುಗಳು ಮತ್ತು ಬಣ್ಣಗಳಲ್ಲಿ ಮಾಲಿಬ್ಡಿನಮ್ ವರ್ಣದ್ರವ್ಯಗಳಿರುವುವು. ಇವು ಶಾಶ್ವತ ಕಾಂತಿ ಕೊಡಬಲ್ಲವು. ರಬ್ಬರ್, ಧರ್ಮ, ಕೂದಲು. ಪಿಂಗಾಣಿಗಳಿಗೆ ಬಣ್ಣ ಹಾಕಲು ಇವು ಉಪಯುಕ್ತ. ರೇಷ್ಮೆ ಮತ್ತು ಉಣ್ಣೆಗಳಿಗೆ ಬಣ್ಣಹಾಕಲು ಇಂಡಿಗೊ ಬದಲು ಮಾಲಿಬ್ಡಿನಮ್ ಬಣ್ಣಗಳನ್ನು ಕೊಡುವುದಿದೆ. ಮಾಲಿಬ್ಡಿನಮ್ ಸಲ್ಫೈಡನ್ನು ಉನ್ನತ ಉಷ್ಣತೆಯ ಮೃದುಚಾಲನೆಗೆ (ಲೂಬ್ರಿಕೇಷನ್) ಬಳಸಲಾಗುತ್ತಿದೆ. ಇದು ಗ್ರ್ಯಾಫೈಟಿನಂತೆಯೇ ಕೆಲಸ ನಿರ್ವಹಿಸುತ್ತದೆ.

	ಮಾಲಿಬ್ಡಿನಮ್ಮಿನ ಐದು ಆಕ್ಸೈಡುಗಳು : ಮಾಲಿಬ್ಡಿನಮ್ ಸೆಸ್ಕ್ವಿ ಆಕ್ಸೈಡ್ (ಒo2ಔ3), ಮಾಲಿಬ್ಡಿನಮ್ ಡೈಆಕ್ಸೈಡ್ (ಒoಔ2), ನೀಲಿಬಣ್ಣದ ಮಾಲಿಬ್ಡಿನಮ್ ಆಕ್ಸೈಡ್ (ಒo3ಔ8), ಮಾಲಿಬ್ಡಿನಮ್ ಪೆಂಟಾಕ್ಸೈಡ್ (ಒo2ಔ5) ಮತ್ತು ಮಾಲಿಬ್ಡಿನಮ್ ಟ್ರೈ ಆಕ್ಸೈಡ್ (ಒoಔ3). ಇವುಗಲ ಪೈಕಿ ನೀಲಿ ಆಕ್ಸೈಡ್ ಮತ್ತು ಟ್ರೈ ಆಕ್ಸೈಡ್ ಮುಖ್ಯವಾದವು. ಮಾಲಿಬ್ಡಿನಮ್ಮಿನ ಪುಡಿ ನೀರಿನಲ್ಲಿ ನಿಲಂಬಿಸಿರುವ ಟ್ರೈಆಕ್ಸೈಡಿನ ಸಂಪರ್ಕದಲ್ಲಿ ಸಾಮಾನ್ಯ ಉಷ್ಣತೆಯಲ್ಲಿ ದೀರ್ಥಕಾಲ ಇದ್ದರೆ ಕಡುನೀಲಿ ಬಣ್ಣದ ಆಕ್ಸೈಡ್ ಉಂಟಾಗುತ್ತದೆ. ಇದನ್ನು ಕಲಿಲ ಸ್ಥಿತಿಗೂ ತರಬಹುದು ಮತ್ತು ಅದರಿಂದ ರಬ್ಬರ್ ಇತ್ಯಾದಿಗಳಿಗೆ ಬಣ್ಣ ಹಾಕಲೂಬಹುದು.

	ಮಾಲಿಬ್ಡಿನೈಟನ್ನು ಹುರಿದು ಟ್ರೈಆಕ್ಸೈಡನ್ನು ಮಾಡಿಕೊಳ್ಳಬಹುದು. ಈ ಆಕ್ಸೈಡ್ ಅಶುದ್ಧ. ಆದ್ದರಿಂದ ಇದನ್ನು ಅಮೋನಿಯ ದ್ರಾವಣದಲ್ಲಿ ವಿಲೀನಗೊಳಿಸಿ ಅಮೋನಿಯಮ್ ಮಾಲಿಬ್ಡೇಟ್ ದ್ರಾವಣ ಮಾಡಿಕೊಂಡು ಅದಕ್ಕೆ ಅಮೋನಿಯಮ್ ಸಲ್ಫೇಟ್ ಸೇರಿಸಿದರೆ ಅದರಲ್ಲಿರಬಹುದಾದ ತಾಮ್ರವೆಲ್ಲ ಒತ್ತರಿಸುತ್ತದೆ. ಇದನ್ನು ಸೋಸಿ ತೆಗೆದುಹಾಕಿ ಉಳಿದ ಮಾಲೆಬ್ಡೇಟ್ ದ್ರಾವಣವನ್ನು ಇಂಗಿಸಿ ಚೆನ್ನಾಗಿ ಕಾಸಿದರೆ ಪರಿಶುದ್ಧ ಟ್ರೈಆಕ್ಸೈಡ್ ದೊರೆಯುವುದು. ಇದು ಬಿಳಿಯ ಘನವಸ್ತು. ನೀರಿನಲ್ಲಿ ಅಲ್ಪದ್ರಾವ್ಯ. ದ್ರಾವಣಕ್ಕೆ ಆಮ್ಲೀಯ ಗುಣವಿದೆ. ಕ್ಷಾರಗಳೊಡನೆ ಮಾಲಿಬ್ಡೇಟ್‍ಗಳನ್ನು ಕೊಡುವುದು. ಆದರೆ ಸದೃಶ ಕ್ರೋಮಿಯಮ್ ಟ್ರೈಆಕ್ಸೈಡಿನಷ್ಟು ಆಮ್ಲೀಯವಲ್ಲ.

	ಅಮೋನಿಯಮ್ ಮಾಲಿಬ್ಡೇಟು ನೈಟ್ರಿಕ್ ಆಮ್ಲದೊಡನೆ ವರ್ತಿಸಿದಾಗ ಮಾಲಿಬ್ಡಿಕ್ ಆಮ್ಲ (ಊ2ಒ0ಔ4) ಉಂಟಾಗುವುದು. ಇದು ಹಳದಿ ಘನವಸ್ತು. ನೀರಿನೊಡನೆ ಕಲಿಲದ್ರಾವಣವಾಗುತ್ತದೆ.

	ಮಾಲಿಬ್ಡೇಟುಗಳಿಗೆ ಸರಳಸೂತ್ರಗಳಿಲ್ಲ; ಅವು ಸರಾಗವಾಗಿ ಪಾಲಿಮಾಲಿಬ್ಡೇಟುಗಳನ್ನು ಕೊಡುತ್ತವೆ. ಉದಾಹರಣೆಗೆ ಅಮೋನಿಯಮ್ ಮಾಲಿಬ್ಡೇಟನ್ನು ಹೆಪ್ಪ ಮಾಲಿಬ್ಡಿಕ್ ಆಮ್ಲದ ಲವಣವೆಂದು ಪರಿಗಣಿಸಿ [(ಓಊ4) ಒo7ಔ24.4ಊ2ಔ] ಎಂದು ಸೂತ್ರೀಕರಿಸಬೇಕು. ಮಾಲಿಬ್ಡಿನಮ್ ಟ್ರೈಆಕ್ಸೈಡು ಜಲೀಯ ಅಮೋನಿಯ ದ್ರಾವಣದೊಡನೆ ವರ್ತಿಸುವಂತೆ ಮಾಡಿ ದ್ರಾವಣವನ್ನು ಸ್ಫಟಿಕೀಕರಿಸಲುಬಿಟ್ಟರೆ ಈ ಲವಣ ದೊರೆಯುವುದು.

	ಫಾಸ್ಫೇಟುಗಳನ್ನು ಗುರುತಿಸಲು ಮತ್ತು ಅದನ್ನು ಪರಿಮಾಣಾತ್ಮಕವಾಗಿ ವಿಶ್ಲೇಷಿಸಲು ಅಮೋನಿಯಮ್ ಮಾಲಿಬ್ಡೇಟ್ ಯುಕ್ತ ಪರಿವರ್ತಕ. ಇದನ್ನು ಸಾರಯುತ ನೈಟ್ರಿಕ್ ಆಮ್ಲದಲ್ಲಿ ವಿಲೀನಗೊಳಿಸಿ ಫಾಸ್ಫೇಟಿನ ದ್ರಾವಣಕ್ಕೆ ಸೇರಿಸಿದರೆ ಅಮೋನಿಯಮ್ ಫಾಸ್ಫೊಮಾಲಿಬ್ಡೇಟಿನ ಹಳದಿ ಒತ್ತರ ಉಂಟಾಗುತ್ತದೆ. ಇದರ ಸಂಯೋಜನೆ ಪ್ರಯೋಗಪರಿಸ್ಥಿತಿಗೆ ಅನುಗುಣವಾಗಿ (ಓಊ4)3Pಔ4.12ಒoಔ3.6ಊ2ಔ ಅಥವಾ (ಓಊ4)3ಒo12ಔ40.6ಊ2ಔ ಆಗಿರುತ್ತದೆ. ಯುಕ್ತ ಪ್ರಯೋಗ ಪರಿಸ್ಥಿತಿಗಳಲ್ಲಿ ಸಿಲಿಕೇಟುಗಳು, ಆರ್ಸನೇಟುಗಳು ಮತ್ತು ವ್ಯಾನಡೇಟುಗಳು ಸದೃಶ ಸಂಕೀರ್ಣ ಮಾಲಿಬ್ಡೇಟ್ ವ್ಯುತ್ಪನ್ನಗಳನ್ನು ಕೊಡುವುವು.

	ಮಾಲಿಬ್ಡಿನಮ್‍ನ್ನು ಫ್ಲೂರೀನ್, ಕ್ಲೋರೀನ್ ಮತ್ತು ಬ್ರೋಮೀನ್‍ಗಳೊಡನೆ ಪ್ರತ್ಯೇಕವಾಗಿ ಕಾಸಿದಾಗ ಆಯಾ ಹ್ಯಾಲೈಡುಗಳು ದೊರೆಯುವುವು. ಇವುಗಳ ಪೈಕಿ ಬಿಳಿಯ ಬಣ್ಣದ, ಹರಳು ರೂಪದ ಹೆಕ್ಸಫ್ಲೂರೈಡ್ ಮತ್ತು ಬೂದುಗಪ್ಪು ಬಣ್ಣದ ಪೆಂಟಕ್ಲೋರೈಡ್‍ಗಳು ಮುಖ್ಯ. ಮಾಲಿಬ್ಡಿನಮ್ ಪೆಂಟಕ್ಲೋರೈಡ್ ಫ್ರೀಡೆಲ್ ಕ್ರ್ಯಾಫ್ಟ್ ಮಾದರಿಯ ಸಂಶ್ಲೇಷಣೆಯಲ್ಲಿ ಉತ್ತಮ ಕ್ರಿಯಾವರ್ಧಕ.
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ